ಎಂ. ಆರ್.ಚರಣ್ ರಾಜ್ ಅವರು ಭಾರತೀಯ ಸಂಗೀತ ಸಂಯೋಜಕ ಮತ್ತು ಗಾಯಕರಾಗಿದ್ದಾರೆ. ಜೀರ್ಜಿಂಬೆ (2016) ಚಿತ್ರದಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಲಾಯಿತು. == ಆರಂಭಿಕ ಜೀವನ == ಚರಣ್ ರಾಜ್ ಕರ್ನಾಟಕ ಸಂಗೀತ ನಲ್ಲಿ ಪೆರುಂಬವೂರ್ ಜಿ. ರವೀಂದ್ರನಾಥ್ ಮತ್ತು ನೀಶಿಯಾ ಮಜೋಲಿ ಜೊತೆ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು. ಅವರು ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್ನಿಂದ ಪಿಯಾನೋದಲ್ಲಿ ಎಂಟು ಪ್ರಮಾಣಪತ್ರವನ್ನು ಹೊಂದಿದ್ದಾರೆ. == ವೃತ್ತಿಜೀವನ == ರಿಕಿ ಕೇಜ್ ಮತ್ತು ವೌಟರ್ ಕೆಲ್ಲರ್ಮನ್ ರ ೨೦೧೫ರ ಗ್ರ್ಯಾಮಿ ಪ್ರಶಸ್ತಿ ವಿಜೇತ ಆಲ್ಬಂ ವಿಂಡ್ಸ್ ಆಫ಼್ ಸಂಸಾರದಲ್ಲಿ ಚರಣ್ ಅವರ ಗಾಯನವಿದೆ. ಕನ್ನಡ ಚಲನಚಿತ್ರಗಳಲ್ಲಿ ರಾಜ್ ಅವರ ಮೊದಲ ಕೆಲಸವು 2014 ರಲ್ಲಿ ಹರಿವು ಚಿತ್ರದ ಮೂಲಕ ಆರಂಭವಾಯಿತು. == ಸಂಗೀತ ಸಂಯೋಜನೆ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಚರಣ್ ರಾಜ್ ಐ ಎಮ್ ಡಿ ಬಿನಲ್ಲಿ